#kannada

2852 posts
 • somashekar 2h

  ಯಾರ ಕವಿತೆಗಳು ಇನ್ಯಾರ ಕುರಿತೂ....
  ನೂರು ತಿರುವುಗಳ ದಾರಿಯಲ್ಲಿ....
  ಜೊತೆಯಾಗಿ ಇರುವವರ್ಯಾರೋ ಕೊನೆಯಲ್ಲಿ............

 • unnatural 19h

  ಹೃದಯ ಪಾದರಸವಿದ್ದಂತೆ,
  ಬಿದ್ದರೆ ಒಡೆದು ಭಾಗವಾಗಿ ಹರಿಯುತ್ತದೆ.
  ಜೋಡಿಸುವುದು ಅಸಾಧ್ಯವೇನಲ್ಲ,
  ಬಹಳ ಕಷ್ಟವಷ್ಟೆ.

  #kannada
  #Life
  #mercury
  #mirakee
  #miraquill
  #writersnetwork
  #quotes
  #RandomThoughts

  Read More

  ಹೃದಯ ಪಾದರಸವಿದ್ದಂತೆ,
  ಬಿದ್ದರೆ ಒಡೆದು ಭಾಗವಾಗಿ ಹರಿಯುತ್ತದೆ.
  ಜೋಡಿಸುವುದು ಅಸಾಧ್ಯವೇನಲ್ಲ,
  ಬಹಳ ಕಷ್ಟವಷ್ಟೆ.
  ©unnatural

 • unnatural 1d

  ಹೇ ಇರುವೆ...
  ಎಲ್ಲೆಲ್ಲೂ ನೀನೇ ಇರುವೆ.

  ಕೊಟ್ಟ ಎಳ್ಳು-ಬೆಲ್ಲವನ್ನು ಅಡುಗೆ ಮನೆಯಲ್ಲಿಟ್ಟಿದ್ದೆ,
  ತಿನ್ನೋಣವೆಂದು ಬಂದಾಗ ನೀ ಅದಕ್ಕೆ ಮುತ್ತಿಗೆ ಹಾಕಿದ್ದೆ.

  ಸಿಹಿ ತಿಂಡಿಗಳಿರುವ ಡಬ್ಬ ತೆರೆದಿಡುವಂತಿಲ್ಲ,
  ತೆರೆದಿಟ್ಟಿದ್ದಾದಲ್ಲಿ ನೀ ಅದನ್ನು ಬಿಡಬೇಕಲ್ಲಾ?!

  ಹುಳ ಹಪ್ಪಟ್ಟೆ ಬಿದ್ದಿರುವ ಹಾಗಿಲ್ಲ,
  ಅದನ್ನು ಕೊಂಡೊಯ್ಯುಲು ನೀ ಬರಲೇ ಬೇಕಲ್ಲಾ?!

  ಕೆಂಪಿರುವೆ, ಕಪ್ಪಿರುವೆ, ಕಟ್ಟಿರುವೆ, ಗಾಳಿ ಇರುವೆ,
  ಎಲ್ಲಾ ಗುಂಪುಗಳಿಗೊಂದು ರಾಣಿ ಇರುವೆ.

  ನಿನ್ನ ದೇಹಕ್ಕಿಂತ ೧೦ಪಟ್ಟು ಹೆಚ್ಚು ಭಾರ ಹೊರುತ್ತಿಯಂತಲ್ಲಾ?!
  ಕಿವಿಯಂತೂ ಇಲ್ಲ, ಕಂಪನವೇ ನಿನಗೆಲ್ಲಾ!!

  ಮನೆಯೊಳಗೆ ನೀ ಬಂದರೆ, ನಮಗೆಲ್ಲಾ ತೊಂದರೆ.
  ದಿಗ್ಬಂಧನ ಹಾಕಿದರೂ ಮತ್ತೆ ಮತ್ತೆ ಬರುವೆ!!!!

  ಎಲ್ಲೆಲ್ಲೂ ನೀನೇ ಇರುವೆ........
  ©unnatural

 • unnatural 2d

  ಪರಿಶ್ರಮ, ಭಕ್ತಿವಿದ್ದಲ್ಲಿ ದಾರಿ!!!!

  ಕಾನನದಲ್ಲಿ ಕಳೆದುಹೋದ ಕವಾಡಿಗ,
  ಕಾಲುದಾರಿಯು ಕಾಣಸಿಗದೆ ಕಸಿವಿಸಿಯಾಗಿ,
  ಕತ್ತಲೆಯ ಕ್ರೌರ್ಯ ಕಂಟಕವಾಗಿ,
  ಕಾಯುವ ಕಣ್ಣು ಕೈಕೊಟ್ಟು,
  ಕೊನೇಗೆ ಕೂಗಿದ "ಕೇಶವ!!! ಕಾಪಾಡೆನ್ನನು".
  ಕರುಣಾಮಯಿ ಕೃಷ್ಣ ಕಾವಲಾದ,
  ಕಳೆದುಹೋದ ಕವಾಡಿಗನಿಗೆ ಕಾವಲಾದ.
  ಕಾಡು ಕೊನೆಯದಾಗಿ, ಕಾಲುದಾರಿ ಕಾಣಸಿಕ್ಕಿದೆಡೆಗೆ,
  ಕೈನೀಡಿದ ಕೇಶವನಿಗೆ ಕವಾಡಿಗನು ಕೃತಘ್ನನಾಗಿ, ಕೈಮುಗಿದು
  "ಕ್ಷೀರಾಭಿಷೇಕ, ಕೇಶವನಿಗೊಂದು ಕ್ಷೀರಾಭಿಷೇಕ"ವೆಂದ


  #kannada
  #mirakee
  #writersnetwork
  #miraquill
  #Krishna
  #Life
  #hurdles

  Read More

  ಕಾನನದಲ್ಲಿ ಕಳೆದುಹೋದ ಕವಾಡಿಗ,
  ಕಾಲುದಾರಿಯು ಕಾಣಸಿಗದೆ ಕಸಿವಿಸಿಯಾಗಿ,
  ಕತ್ತಲೆಯ ಕ್ರೌರ್ಯ ಕಂಟಕವಾಗಿ,
  ಕಾಯುವ ಕಣ್ಣು ಕೈಕೊಟ್ಟು,
  ಕೊನೇಗೆ ಕೂಗಿದ "ಕೇಶವ!!! ಕಾಪಾಡೆನ್ನನು".
  ಕರುಣಾಮಯಿ ಕೃಷ್ಣ ಕಾವಲಾದ,
  ಕಳೆದುಹೋದ ಕವಾಡಿಗನಿಗೆ ಕಾವಲಾದ.
  ಕಾಡು ಕೊನೆಯದಾಗಿ, ಕಾಲುದಾರಿ ಕಾಣಸಿಕ್ಕಿದೆಡೆಗೆ,
  ಕೈನೀಡಿದ ಕೇಶವನಿಗೆ ಕವಾಡಿಗನು ಕೃತಘ್ನನಾಗಿ, ಕೈಮುಗಿದು
  "ಕ್ಷೀರಾಭಿಷೇಕ, ಕೇಶವನಿಗೊಂದು ಕ್ಷೀರಾಭಿಷೇಕ"ವೆಂದ
  ©unnatural

 • unnatural 3d

  ಭೈರಪ್ಪನವರ ಮಂದ್ರ ❤
  #kannada
  #Mandra
  #book
  #life
  #mistakes
  #mirakee
  #miraquill
  #writersnetwork

  Read More

  ಕೆಲವೊಂದು ತಪ್ಪುಗಳನ್ನು ಸರಿಮಾಡುವುದಕ್ಕೆ ಆಗುವುದಿಲ್ಲ.
  ಆ ತಪ್ಪುಗಳನ್ನು ನಮ್ಮಲೇ ಹೂತಿಟ್ಟುಕೊಂಡು ಅದರ ಜೊತೆ ಯುದ್ಧ ಮಾಡಿ ಗೆಲ್ಲಲ್ಲು ಸಾಧ್ಯವೇ ಇಲ್ಲ. "ಸತ್ಯ" ನಮ್ಮನ್ನು ನಿರಾಳ ಮಾಡಿದರು, ತಪ್ಪಿಂದ ತಪ್ಪಿಸಿಕೊಳ್ಳುವುದು ಕಷ್ಟ.

 • unnatural 5d

  ಕಾಡಿನಲ್ಲಿ ಸಿಗೋ ಹಣ್ಣುಗಳ ರುಚಿನೇ ಬೇರೆ.


  #kannada
  #fruits
  #Writersnetwork
  #mirakee
  #writersnetwork

  Read More

  ಸಂಜೆಯಾಗಲು ಹೊರಡುತ್ತಿದ್ದವಿ ಹುಡುಕಲು,
  ಮಕ್ಕಳ ಸೈನ್ಯಕ್ಕೇ ದೊಡ್ಡವರೊಬ್ಬರು ಕಾವಲು,

  ತೋಟವ ದಾಟಿ, ಗುಡ್ಡವ ಹತ್ತುತ್ತಾ,
  ದಾಪುಗಾಲಿಡುತ್ತ, ಹರಟೆಯ ಹೊಡೆಯುತ್ತ,

  ಆಚೆ ಈಚೆ ಗೊತ್ತಿದ್ದ ಮರ, ಪೊದೆ, ಗಿಡವನ್ನು ನೋಡುತ್ತ,
  ಸಿಕ್ಕ ಬೆಮ್ಮಾರಲು, ಪನ್ನೇರಲೆಯ ತಂದ ಚೀಲಕ್ಕೆ ತುರುಕುತ್ತಾ,
  ಹೊಟ್ಟೆ ತುಂಬುವಷ್ಟು ತಿಂದಿ ತೆಗುತ್ತಾ,

  ಇಳಿ ಸಂಜೆಯ ಸೂರ್ಯನ ಮೇಲೊಂದು ನಿಗವಿಟ್ಟಿ,
  ಹೊರಡುತ್ತಿದ್ದವಿ ಹುಡುಕಲು, ಹಣ್ಣುಗಳ ಹುಡುಕಲು.
  ©unnatural

 • akkshu 1w

  ಒಬ್ಬರು ಕನಸಿನ ಖಜಾನೆಯನ್ನು ತೆರೆಯುವ ಹಂಬಲದಲ್ಲಿದ್ದರೆ
  ಮತ್ತೊಬ್ಬರು ಅದಕ್ಕೆ ಬೀಗ ಜಡಿದು ಕೀಲಿಯನ್ನೆ ಕಳೆದಿದ್ದಾರೆ
  ©akkshu

 • unnatural 1w

  When you are helpless,
  You need to let go of worries.

  #life
  #kannada
  #worries
  #mirakee
  #Writersnetwork
  #miraquill
  #RandomThoughts

  Read More

  ನೆಲವನ್ನು ಅಗೆದ ಪಿಕಾಸಿಗೆ,
  ತಾನು ವಸುಧೆಗೇ ಗಾಯಗೊಳಿಸಿದೆ ಎಂಬ ಚಿಂತೆ!!!!!
  ಆಡಿಸುವವನು ಮಾನವ,
  ಚಿಂತೆ ಮಾಡಿ ಅದು ಏನು ಮಾಡ ಬೇಕಾಗಿದೆ!!!!!
  ©unnatural

 • unnatural 1w

  ಮೊನ್ನೆ ಮಾತನಾಡಿಸಿದವರು, ಇವತ್ತಿಗಿಲ್ಲ.
  ಯಾರು ಯಾವಾಗ ವಿದಾಯ ಹೇಳ್ತಾರೆ ಅಂತ ಪರಮಾತ್ಮನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಇರುವಷ್ಟು ದಿನ ಎಲ್ಲರ್ ಜೊತೆ ಖುಷಿಯಾಗಿ ಇರಬೇಕು

  #kannada #Life #Time #mirakee #writersnetwork #miraquill

  Read More

  ಗಾಳಿಯಿರಲ್ಲಿಲ್ಲ, ಮಳೆಯಿರಲ್ಲಿಲ್ಲ,
  ಮನೆ ದುರ್ಬಲವಾಗಿರಲ್ಲಿಲ್ಲ,
  ಕಂಬಗಳು ಅದೃಢವಾಗಿರಲ್ಲಿಲ್ಲ,
  ಮರಳಿನ ಮನೆಯಂತು ಅಲ್ಲವೇ ಅಲ್ಲ,
  ಗೋಡೆಗೆ ಆಯಾಸವಾಗಿರಲ್ಲಿಲ್ಲ,
  ಕಿಟಕಿಗಳಿಗೆ ದಣಿವಾಗಿರಲ್ಲಿಲ್ಲ,
  ಆದರೂ ಬಿತ್ತು, ಧೊಪ್ಪೆಂದು ಬಿತ್ತು.
  ಯಾರಿಗು ಹೇಳದೇ ಕೇಳದೇ
  ಸುಳಿವು ನೀಡದೇ, ಕಾರಣ ತಿಳಿಸದೆ,
  ಧೊಪ್ಪೆಂದು ಬಿತ್ತು.

  ಕಾಲವಾಗಿರಬೇಕು.
  ಸಮಯ ಮುಗಿದಾಗ "ನಿಲ್ಲು" ಎಂದು ಹೇಳಲು
  ನಾನ್ಯಾರು?! ನೀನ್ಯಾರು ?!
  ©unnatural

 • somashekar 1w

  ಜೀವನ ಒಂದು ವೀಣೆ ಮತ್ತು
  ವೀಣೆ ನುಡಿಸುವವನ ನಡುವಿನ ಸಂಬಂಧದ ಹಾಗೆ,

  ವೀಣೆಯ ತಂತಿ ಸರಿಯಾಗಿದ್ದರೆ ಕೇಳಲು ಶಬ್ದ ಇಂಪಾಗಿ ಬರುತ್ತದೆ,

  ಹಾಗೆಯೇ ಅದೇ ವೀಣೆಯ ತಂತಿ ಹರಿದರೂ
  ಮತ್ತೆ ಪುನಃ ಕಟ್ಟಿದರೂ ಕೂಡ
  ಆ ವೀಣೆ ನುಡಿಸುವವನು ಸರಿಯಾಗಿರಬೇಕು.
  ©Somashekar

 • anala_ 1w

  .

 • unnatural 1w

  ಬಿಸಿಯಾದ ಕಾವಲಿ ಮೇಲೆ ಬಿದ್ದರಷ್ಟೇ,
  ಕಲಸಿದ ಹಿಟ್ಟು ಚಪಾತಿ ಅಥವ ದೋಸೆಯಾಗುವುದು.

  ಕುದಿಯುವ ಎಣ್ಣೆಯಲ್ಲಿ ಬಿದ್ದು ಈಜಾಡಿದರಷ್ಟೇ
  ಜಾಮೂನು ಅಥವ ಚಕ್ಕುಲಿ ಸಿಗುವುದು.

  ಬಿಸಿ ಬಿಸಿಯೆಂದು ಕಲಸಿದ ಹಿಟ್ಟು
  ಅಳುತ್ತ ಏನೂ ಮಾಡದೆ ಕುಳಿತ್ತಿದ್ದರೆ
  ಯಾರಿಗೇನು ಉಪಯೋಗವಾಯಿತು ಕೃಷ್ಣಾತ್ಮ!!!!
  ©unnatural

 • unnatural 2w

  ಎದ್ದೇಳಕ್ಕೆ ಮನ್ಸಾಗಲ್ಲ ������

  ನಾ ತಬ್ಬಿಕೊಂಡ ದಿಂಬು,
  ನನ್ನ ಅಪ್ಪಿಕೊಂಡ ರಗ್ಗು,
  ಚಳಿಗೆ ನಮ್ಮೆಲ್ಲಾರಿಗೂ ಹಾಸಿಗೆ ಜೊತೆ ನಂಟು.


  #kannada
  #ಚಳಿ
  #winterishere
  #mirakee
  #miraquill
  #writersnetwork
  #cold
  #sleep
  #laziness

  Read More

  ನಾ ತಬ್ಬಿಕೊಂಡ ದಿಂಬು,
  ನನ್ನ ಅಪ್ಪಿಕೊಂಡ ರಗ್ಗು,
  ಚಳಿಗೆ ನಮ್ಮೆಲ್ಲಾರಿಗೂ ಹಾಸಿಗೆ ಜೊತೆ ನಂಟು.
  ©unnatural

 • unnatural 2w

  ಮನುಷ್ಯನಿಗೆ ವರ
  ಹಸಿರಿಗೆ ಬರ

  #kannada
  #deforestation
  #mirakee
  #miraquill
  #Writersnetwork

  Read More

  ಹಸಿರಿನ ಸಮೃದ್ಧಿಯಿತ್ತು.

  ಮಾನವನ ಹಸಿವು ತುಂಬಿಸಲು,
  ಹಸಿರು ನಾಟವಾಯಿತು.
  ©unnatural

 • somashekar 2w

  ಎಲ್ಲವನ್ನೂ ನೆನೆಯುತ್ತಾ ಹಿಂದೊಮ್ಮೆ ತಿರುಗಿ ನೋಡಿದಾಗ....
  ತುಂಬಿದ ನೆನಪುಗಳು, ಕಂಡ ಕನಸುಗಳು, ಸದ್ಯದ ಕ್ಷಣಗಳು.... ಬಹಳ ಕಾಡಿದಂತಾಯಿತು
  ಆ ಕ್ಷಣದಲ್ಲಿ....
  ನನ್ನ....
  ಕಣ್ಣ ಬಿಂದುವಿನಿಂದ ಹನಿ ಜಾರಿತು....
  ಗಂಟಲು ಬಿಗಿದಪ್ಪಿತು....
  ಮಾತು ನಿಂತು ಹೋಯಿತು....
  ನನ್ನ ಬರವಣಿಗೆ ಮಾತನಾಡಿತು....


  ಮುಂದಿನ ಭಾಗದಲ್ಲಿ...!
  ©somashekar

 • unnatural 2w

  ಆಗ್ಲಿ ಎಲ್ಲಾರಿಗೂ ಒಳ್ಳೇದು!!!!
  #kannada
  #newyear
  #2022
  #mirakee
  #writersnetwork
  #miraquill

  Read More

  ದಿವಸದಲ್ಲೇನು ವ್ಯತ್ಯಾಸ
  ಮುಳುಗೆದ್ದು ಬರುವ ಅದೇ ಸೂರ್ಯ ಚಂದ್ರರು !!!!
  ©unnatural

 • somashekar 2w

  ಬಲ್ಲವರು ನುಡಿದರು ಬದಲಾವಣೆಯೇ ಜಗದ ನಿಯಮ.... ಅದೇ ರೀತಿ ಜೀವನದಲ್ಲಿ
  ಅಂದುಕೊಂಡು ಹೋಗುವುದಕ್ಕಿಂತ ಹೊಂದಿಕೊಂಡು ಹೋಗುವುದೇ ಉತ್ತಮ....

  ಹೊಸ ವರ್ಷ ಹೊಸ ದಿನ ಹೊಸ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ, ಮತ್ತೆ ಮತ್ತೆ ಅವು ನನಸಾಗುತ್ತಿರಲಿ....

  ಹಿಂದೆ ಆಗಿಹೋದ ಕಹಿ ಘಟನೆಗಳನ್ನು ಮರೆಯುತ್ತಾ, ಆಗಿ ಹೋದ ಸಿಹಿ ಘಟನೆಗಳೊಂದಿಗೆ ನಲಿಯುತ್ತ
  ಹೊಸ ಕನಸುಗಳೊಂದಿಗೆ "2022" ಹೊಸ ವರ್ಷವನ್ನು ಸ್ವಾಗತಿಸೋಣ....
  ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...!

  -ಇಂತಿ ನಿಮ್ಮವ
  ©somashekar

 • unnatural 2w

  ಆಸೆಗಳ ಕಟ್ಟಡ ಕಟ್ಟಿ
  ಕೆಲಸ ಮಾಡದೆ, ಕನಸ್ಸುಗಳ ಕಾಣುತ
  ನಿದ್ದೆ ಮಾಡಿದರೇನು ಬಂತು ಕೃಷ್ಣಾತ್ಮ!!!!

  ಕಲ್ಲಿನ ದಾರಿಯಲ್ಲಿ
  ಚಪ್ಪಲಿ ಹಾಳಾಗುವುದೆಂದು, ಕೈಯಲ್ಲಿ
  ಇಟ್ಟುಕೊಳ್ಳುವವರ ಗತಿಯೇನು ಕೃಷ್ಣಾತ್ಮ!!!!

  #kannada #Krishnaatma #talks #randomthoughts #mirakee
  #miraquill #writersnetwork

  Read More

  ಆಸೆಗಳ ಕಟ್ಟಡ ಕಟ್ಟಿ
  ಕೆಲಸ ಮಾಡದೆ, ಕನಸ್ಸುಗಳ ಕಾಣುತ
  ನಿದ್ದೆ ಮಾಡಿದರೇನು ಬಂತು ಕೃಷ್ಣಾತ್ಮ!!!!

  ಕಲ್ಲಿನ ದಾರಿಯಲ್ಲಿ
  ಚಪ್ಪಲಿ ಹಾಳಾಗುವುದೆಂದು, ಕೈಯಲ್ಲಿ
  ಇಟ್ಟುಕೊಳ್ಳುವವರ ಗತಿಯೇನು ಕೃಷ್ಣಾತ್ಮ!!!!
  ©unnatural

 • unnatural 3w

  ವಯಸ್ಸಾಯಿತೆಂಬ ಕನಸ್ಸು,
  ತಳಮಳಗೊಂಡು ಎದ್ದ ಮನಸ್ಸು,
  ಬೇಡವೆಂದರು ಈ ಕನಸ್ಸಾಗುವುದು ನನಸ್ಸು,
  ಗಾಳ ಹಾಕಲು ಸಿಗದ ಈ ವಯಸ್ಸು.

  #ವಯಸ್ಸು #ಕನಸು #ಮನಸ್ಸು #ನನಸ್ಸು #kannada #ಕನ್ನಡ
  #mirakee #miraquill #writersnetwork #Aging #time #humour #life #time

  Read More

  ವಯಸ್ಸಾಯಿತೆಂಬ ಕನಸ್ಸು,
  ತಳಮಳಗೊಂಡು ಎದ್ದ ಮನಸ್ಸು,
  ಬೇಡವೆಂದರು ಈ ಕನಸ್ಸಾಗುವುದು ನನಸ್ಸು,
  ಗಾಳ ಹಾಕಲು ಸಿಗದ ಈ ವಯಸ್ಸು.
  ©unnatural

 • unnatural 3w

  ನೀ ತಲೆ ನೋವಿಗೆ ಪ್ಯಾರಸಿಟಮಲ್ ಇದ್ದಂತೆ.
  ಬರಲಿ ನನಗೆ ಯಾವಾಗಲೂ ತಲೆ ನೋವು,
  ನೀನೆ ನನಗೆ ಮುಲಾಮು.

  #headache
  #humour
  #love
  #kannada
  #mirakee
  #writersnetwork
  #miraquill
  #paracetamol
  #medicine

  Read More

  ನೀ ತಲೆ ನೋವಿಗೆ ಪ್ಯಾರಸಿಟಮಲ್ ಇದ್ದಂತೆ.
  ಬರಲಿ ನನಗೆ ಯಾವಾಗಲೂ ತಲೆ ನೋವು,
  ನೀನೆ ನನಗೆ ಮುಲಾಮು.