unnatural

dheemanthmd.wordpress.com/2021/07/18/

Software engineer, partial writer, lyricist. ಅನಾತ್ಮೀಯ

Grid View
List View
Reposts
 • unnatural 15h

  ಹೇ ಇರುವೆ...
  ಎಲ್ಲೆಲ್ಲೂ ನೀನೇ ಇರುವೆ.

  ಕೊಟ್ಟ ಎಳ್ಳು-ಬೆಲ್ಲವನ್ನು ಅಡುಗೆ ಮನೆಯಲ್ಲಿಟ್ಟಿದ್ದೆ,
  ತಿನ್ನೋಣವೆಂದು ಬಂದಾಗ ನೀ ಅದಕ್ಕೆ ಮುತ್ತಿಗೆ ಹಾಕಿದ್ದೆ.

  ಸಿಹಿ ತಿಂಡಿಗಳಿರುವ ಡಬ್ಬ ತೆರೆದಿಡುವಂತಿಲ್ಲ,
  ತೆರೆದಿಟ್ಟಿದ್ದಾದಲ್ಲಿ ನೀ ಅದನ್ನು ಬಿಡಬೇಕಲ್ಲಾ?!

  ಹುಳ ಹಪ್ಪಟ್ಟೆ ಬಿದ್ದಿರುವ ಹಾಗಿಲ್ಲ,
  ಅದನ್ನು ಕೊಂಡೊಯ್ಯುಲು ನೀ ಬರಲೇ ಬೇಕಲ್ಲಾ?!

  ಕೆಂಪಿರುವೆ, ಕಪ್ಪಿರುವೆ, ಕಟ್ಟಿರುವೆ, ಗಾಳಿ ಇರುವೆ,
  ಎಲ್ಲಾ ಗುಂಪುಗಳಿಗೊಂದು ರಾಣಿ ಇರುವೆ.

  ನಿನ್ನ ದೇಹಕ್ಕಿಂತ ೧೦ಪಟ್ಟು ಹೆಚ್ಚು ಭಾರ ಹೊರುತ್ತಿಯಂತಲ್ಲಾ?!
  ಕಿವಿಯಂತೂ ಇಲ್ಲ, ಕಂಪನವೇ ನಿನಗೆಲ್ಲಾ!!

  ಮನೆಯೊಳಗೆ ನೀ ಬಂದರೆ, ನಮಗೆಲ್ಲಾ ತೊಂದರೆ.
  ದಿಗ್ಬಂಧನ ಹಾಕಿದರೂ ಮತ್ತೆ ಮತ್ತೆ ಬರುವೆ!!!!

  ಎಲ್ಲೆಲ್ಲೂ ನೀನೇ ಇರುವೆ........
  ©unnatural

 • unnatural 1d

  ಪರಿಶ್ರಮ, ಭಕ್ತಿವಿದ್ದಲ್ಲಿ ದಾರಿ!!!!

  ಕಾನನದಲ್ಲಿ ಕಳೆದುಹೋದ ಕವಾಡಿಗ,
  ಕಾಲುದಾರಿಯು ಕಾಣಸಿಗದೆ ಕಸಿವಿಸಿಯಾಗಿ,
  ಕತ್ತಲೆಯ ಕ್ರೌರ್ಯ ಕಂಟಕವಾಗಿ,
  ಕಾಯುವ ಕಣ್ಣು ಕೈಕೊಟ್ಟು,
  ಕೊನೇಗೆ ಕೂಗಿದ "ಕೇಶವ!!! ಕಾಪಾಡೆನ್ನನು".
  ಕರುಣಾಮಯಿ ಕೃಷ್ಣ ಕಾವಲಾದ,
  ಕಳೆದುಹೋದ ಕವಾಡಿಗನಿಗೆ ಕಾವಲಾದ.
  ಕಾಡು ಕೊನೆಯದಾಗಿ, ಕಾಲುದಾರಿ ಕಾಣಸಿಕ್ಕಿದೆಡೆಗೆ,
  ಕೈನೀಡಿದ ಕೇಶವನಿಗೆ ಕವಾಡಿಗನು ಕೃತಘ್ನನಾಗಿ, ಕೈಮುಗಿದು
  "ಕ್ಷೀರಾಭಿಷೇಕ, ಕೇಶವನಿಗೊಂದು ಕ್ಷೀರಾಭಿಷೇಕ"ವೆಂದ


  #kannada
  #mirakee
  #writersnetwork
  #miraquill
  #Krishna
  #Life
  #hurdles

  Read More

  ಕಾನನದಲ್ಲಿ ಕಳೆದುಹೋದ ಕವಾಡಿಗ,
  ಕಾಲುದಾರಿಯು ಕಾಣಸಿಗದೆ ಕಸಿವಿಸಿಯಾಗಿ,
  ಕತ್ತಲೆಯ ಕ್ರೌರ್ಯ ಕಂಟಕವಾಗಿ,
  ಕಾಯುವ ಕಣ್ಣು ಕೈಕೊಟ್ಟು,
  ಕೊನೇಗೆ ಕೂಗಿದ "ಕೇಶವ!!! ಕಾಪಾಡೆನ್ನನು".
  ಕರುಣಾಮಯಿ ಕೃಷ್ಣ ಕಾವಲಾದ,
  ಕಳೆದುಹೋದ ಕವಾಡಿಗನಿಗೆ ಕಾವಲಾದ.
  ಕಾಡು ಕೊನೆಯದಾಗಿ, ಕಾಲುದಾರಿ ಕಾಣಸಿಕ್ಕಿದೆಡೆಗೆ,
  ಕೈನೀಡಿದ ಕೇಶವನಿಗೆ ಕವಾಡಿಗನು ಕೃತಘ್ನನಾಗಿ, ಕೈಮುಗಿದು
  "ಕ್ಷೀರಾಭಿಷೇಕ, ಕೇಶವನಿಗೊಂದು ಕ್ಷೀರಾಭಿಷೇಕ"ವೆಂದ
  ©unnatural

 • unnatural 2d

  ಭೈರಪ್ಪನವರ ಮಂದ್ರ ❤
  #kannada
  #Mandra
  #book
  #life
  #mistakes
  #mirakee
  #miraquill
  #writersnetwork

  Read More

  ಕೆಲವೊಂದು ತಪ್ಪುಗಳನ್ನು ಸರಿಮಾಡುವುದಕ್ಕೆ ಆಗುವುದಿಲ್ಲ.
  ಆ ತಪ್ಪುಗಳನ್ನು ನಮ್ಮಲೇ ಹೂತಿಟ್ಟುಕೊಂಡು ಅದರ ಜೊತೆ ಯುದ್ಧ ಮಾಡಿ ಗೆಲ್ಲಲ್ಲು ಸಾಧ್ಯವೇ ಇಲ್ಲ. "ಸತ್ಯ" ನಮ್ಮನ್ನು ನಿರಾಳ ಮಾಡಿದರು, ತಪ್ಪಿಂದ ತಪ್ಪಿಸಿಕೊಳ್ಳುವುದು ಕಷ್ಟ.

 • unnatural 3d

  ಕಾಡಿನಲ್ಲಿ ಸಿಗೋ ಹಣ್ಣುಗಳ ರುಚಿನೇ ಬೇರೆ.


  #kannada
  #fruits
  #Writersnetwork
  #mirakee
  #writersnetwork

  Read More

  ಸಂಜೆಯಾಗಲು ಹೊರಡುತ್ತಿದ್ದವಿ ಹುಡುಕಲು,
  ಮಕ್ಕಳ ಸೈನ್ಯಕ್ಕೇ ದೊಡ್ಡವರೊಬ್ಬರು ಕಾವಲು,

  ತೋಟವ ದಾಟಿ, ಗುಡ್ಡವ ಹತ್ತುತ್ತಾ,
  ದಾಪುಗಾಲಿಡುತ್ತ, ಹರಟೆಯ ಹೊಡೆಯುತ್ತ,

  ಆಚೆ ಈಚೆ ಗೊತ್ತಿದ್ದ ಮರ, ಪೊದೆ, ಗಿಡವನ್ನು ನೋಡುತ್ತ,
  ಸಿಕ್ಕ ಬೆಮ್ಮಾರಲು, ಪನ್ನೇರಲೆಯ ತಂದ ಚೀಲಕ್ಕೆ ತುರುಕುತ್ತಾ,
  ಹೊಟ್ಟೆ ತುಂಬುವಷ್ಟು ತಿಂದಿ ತೆಗುತ್ತಾ,

  ಇಳಿ ಸಂಜೆಯ ಸೂರ್ಯನ ಮೇಲೊಂದು ನಿಗವಿಟ್ಟಿ,
  ಹೊರಡುತ್ತಿದ್ದವಿ ಹುಡುಕಲು, ಹಣ್ಣುಗಳ ಹುಡುಕಲು.
  ©unnatural

 • unnatural 5d

  Worst part of growing up
  is losing loved ones .

  Time waits for none, everyone has to bid a goodbye.

  Its disheartening to see those who told stories to put us to sleep in childhood getting older.
  ©unnatural

 • unnatural 1w

  When you are helpless,
  You need to let go of worries.

  #life
  #kannada
  #worries
  #mirakee
  #Writersnetwork
  #miraquill
  #RandomThoughts

  Read More

  ನೆಲವನ್ನು ಅಗೆದ ಪಿಕಾಸಿಗೆ,
  ತಾನು ವಸುಧೆಗೇ ಗಾಯಗೊಳಿಸಿದೆ ಎಂಬ ಚಿಂತೆ!!!!!
  ಆಡಿಸುವವನು ಮಾನವ,
  ಚಿಂತೆ ಮಾಡಿ ಅದು ಏನು ಮಾಡ ಬೇಕಾಗಿದೆ!!!!!
  ©unnatural

 • unnatural 1w

  ಮೊನ್ನೆ ಮಾತನಾಡಿಸಿದವರು, ಇವತ್ತಿಗಿಲ್ಲ.
  ಯಾರು ಯಾವಾಗ ವಿದಾಯ ಹೇಳ್ತಾರೆ ಅಂತ ಪರಮಾತ್ಮನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಇರುವಷ್ಟು ದಿನ ಎಲ್ಲರ್ ಜೊತೆ ಖುಷಿಯಾಗಿ ಇರಬೇಕು

  #kannada #Life #Time #mirakee #writersnetwork #miraquill

  Read More

  ಗಾಳಿಯಿರಲ್ಲಿಲ್ಲ, ಮಳೆಯಿರಲ್ಲಿಲ್ಲ,
  ಮನೆ ದುರ್ಬಲವಾಗಿರಲ್ಲಿಲ್ಲ,
  ಕಂಬಗಳು ಅದೃಢವಾಗಿರಲ್ಲಿಲ್ಲ,
  ಮರಳಿನ ಮನೆಯಂತು ಅಲ್ಲವೇ ಅಲ್ಲ,
  ಗೋಡೆಗೆ ಆಯಾಸವಾಗಿರಲ್ಲಿಲ್ಲ,
  ಕಿಟಕಿಗಳಿಗೆ ದಣಿವಾಗಿರಲ್ಲಿಲ್ಲ,
  ಆದರೂ ಬಿತ್ತು, ಧೊಪ್ಪೆಂದು ಬಿತ್ತು.
  ಯಾರಿಗು ಹೇಳದೇ ಕೇಳದೇ
  ಸುಳಿವು ನೀಡದೇ, ಕಾರಣ ತಿಳಿಸದೆ,
  ಧೊಪ್ಪೆಂದು ಬಿತ್ತು.

  ಕಾಲವಾಗಿರಬೇಕು.
  ಸಮಯ ಮುಗಿದಾಗ "ನಿಲ್ಲು" ಎಂದು ಹೇಳಲು
  ನಾನ್ಯಾರು?! ನೀನ್ಯಾರು ?!
  ©unnatural

 • unnatural 1w

  1. Stay active, Don't retire

  2. Take it slow

  3. Don't fill your stomach

  4. Surround your self with good friends

  5. Get in shape for your next birthday

  6. Smile

  7. Reconnect with nature

  8. Give Thanks

  9. Live in the moment

  10. Follow your ikigai


  #ikigai
  #Japanese
  #Book
  #Reading
  #mirakee
  #Writersnetwork
  #miraquill

  Read More

  IKIGAI #2

  The ten rules of IKIGAI

  ~●IKIGAI●~

 • unnatural 1w

  ಬಿಸಿಯಾದ ಕಾವಲಿ ಮೇಲೆ ಬಿದ್ದರಷ್ಟೇ,
  ಕಲಸಿದ ಹಿಟ್ಟು ಚಪಾತಿ ಅಥವ ದೋಸೆಯಾಗುವುದು.

  ಕುದಿಯುವ ಎಣ್ಣೆಯಲ್ಲಿ ಬಿದ್ದು ಈಜಾಡಿದರಷ್ಟೇ
  ಜಾಮೂನು ಅಥವ ಚಕ್ಕುಲಿ ಸಿಗುವುದು.

  ಬಿಸಿ ಬಿಸಿಯೆಂದು ಕಲಸಿದ ಹಿಟ್ಟು
  ಅಳುತ್ತ ಏನೂ ಮಾಡದೆ ಕುಳಿತ್ತಿದ್ದರೆ
  ಯಾರಿಗೇನು ಉಪಯೋಗವಾಯಿತು ಕೃಷ್ಣಾತ್ಮ!!!!
  ©unnatural

 • unnatural 1w

  Something should keeps us busy all the day!!!

  I would like to share few lines/quotes from the book/novel that I read.
  Reading is one thing that makes me happy. I hope sharing few good things make others happy.

  And adding to that, I can easily keep notes of the great lines here in miraquill. I have a bad memory��

  Book : IKIGAI : The Japanese Secret to a Long and Happy Life.
  Author: Hector gracia and Francesc Miralles.


  *
  ** Can someone really retire if he is passionate about what he does?

  ** Ichoriba chode: treat every one like brother even if you have never met them before

  ** The most important thing is to focus on the journey

  ** Happiness is in doing, not in the result

  ** Never to be afraid to die, because you are born to die.

  *

  #ikigai
  #book
  #Japan
  #English
  #mirakee
  #miraquill
  #Writersnetwork

  Read More

  IKIGAI #1